ಪರ್ಷಿಯನ್ ಖಾರಿ -
	ಅರಬ್ಬಿ ಪರ್ಯಾಯದ್ವೀಪ ಮತ್ತು ಆಗ್ನೇಯ ಇರಾನಿನ ನಡುವೆ ಚಾಚಿರುವ ಹಿಂದೂ ಮಹಾಸಾಗರದ ತೆಟ್ಟೆ (ಉತ್ತಳ) ಸಮುದ್ರಭಾಗ (ಪರ್ಷಿಯನ್ ಗಲ್ಭ್). ಇದರ ಉದ್ದ 984 ಕಿಮೀ. ಭೌಗೋಲಿಕವಾಗಿ ಇದು ಶಿಥ್-ಆಲ್-ಅವಾಸಿನಿಂದ ಓಮಾನಿನ ಮುಸುಂಡಾಮ್ ಪರ್ಯಾಯ ದ್ವೀಪದತ್ತ ಆಗ್ನೇಯವಾಗಿ ಚಾಚಿರುವ ಜಲಭಾಗ. ಇಲ್ಲಿ ಹಾರ್‍ಮುಜ್ó ಜಲಸಂಧಿ ಪರ್ಷಿಯನ್ ಖಾರಿಯನ್ನು ಓಮಾನ್ ಖಾರಿಯಿಂದ ಬೇರ್ಪಡಿಸುತ್ತದೆ. ಹಾರ್‍ಮುಜ್ó ಜಲಸಂಧಿ ಓಮಾನ್ ಖಾರಿ ಹಾಗೂ ಪರ್ಷಿಯನ್ ಖಾರಿ ಈ ಮೂರಕ್ಕು ಪರ್ಷಿಯನ್‍ಖಾರಿ ಎನ್ನುವುದೇ ರೂಢಿಯಲ್ಲಿದೆ. ಪರ್ಷಿಯನ್ ಖಾರಿಯ ವಿಸ್ತೀರ್u 2.40.000 ಚದರ ಕಿಲೊ ಮೀಟರುಗಳು. ಹಾರ್‍ಮುಜ್ó ಜಲಸಂಧಿಯ ಬಳಿ ಇದರ ಅಗಲ ಸುಮಾರು 80 ಕಿಮೀಗಳಷ್ಟು ಇದೆ. ಖಾರಿಯ ಅಗಲ ತಲೆಭಾಗದಲ್ಲಿ 224 ಕಿಮೀ. ಗರಿಷ್ಠ ಅಗಲ 320 ಕಿಮೀ. ಈ ಸಮುದ್ರಭಾಗದ ಆಳ ಹೆಚ್ಚೆಂದರೆ 110ಮೀ. ಕೆಲವೆಡೆ 90 ಮೀ. ಆಳವಿದ್ದರೆ ಉಳಿದೆಡೆ 25 ಮೀ ಕನಿಷ್ಠ ಆಳ ಇರುತ್ತದೆ. ಖಾರಿಯ ಅತ್ಯಂತ ಆಳವಾದ ಭಾಗ ಪರ್ಷಿಯನ್ ತೀರದ ಬಳಿ ಕಂಡುಬರುತ್ತದೆ. ಇಲ್ಲಿ ಹಾರ್‍ಮುಜ್ó ಜಲಸಂಧಿಯ ಸುಮಾರು 112 ಕಿಮೀ. ಉದ್ದಮ ತೆಟ್ಟೆ ಭಾಗ ಖಾರಿಯನ್ನು ಪೂರ್ವ-ಪಶ್ಚಿಮವಾಗಿ ಬೇರ್ಪಡಿಸುತ್ತದೆ.

	ಪರ್ಷಿಯನ್ ಖಾರಿ ಅಸಂಖ್ಯಾತ ದ್ವೀಪಗಳಿಗೆ ಹೆಸರಾಗಿದೆ. ಇವುಗಳಲ್ಲಿ ಕೆಲವು ಮಡಿಕೆಗಳ ಶೃಂಗಗಳು ಮತ್ತೆ ಕೆಲವು ಲವಣದ ಅಡಚುಗಳು. ಉಳಿದ ಭೂಭಾಗ ಕ್ವಾಟರ್ನರಿ ಯುಗದಲ್ಲಿ ಸಂಚಯಿಸಿದ ನಿಕ್ಷೇಪಗಳು ಇವನ್ನು ಪ್ರತಿನಿಧಿಸುತ್ತವೆ. ಖಾರಿಯ ತಲೆಭಾಗದಲ್ಲಿ ಟೈಗ್ರಿಸ್-ಯುಫ್ರೇಟಸ್ ಮುತ್ತು ಕಾರುನ್ ನದಿಗಳು ಸಿಹಿ_ನೀರನ್ನು ಹರಿಸುತ್ತವೆ. ಇವುಗಳ ಜೊತೆಗೆ ಪರ್ಷಿಯನ್ ತೀರದಲ್ಲಿ ವಿಚ್ಛಿತ್ತಿಯಾಗಿ ಹರಿಯುವ ತೊರೆಗಳಿಂದಲೂ ಖಾರಿಗೆ ಸಿಹಿನೀರಿನ ಸೆರ್ಪಡೆಯಾಗುತ್ತದೆ. ಪ್ರವೇಶ ಭಾಗದಲ್ಲಿ ನೀರಿನ ಉಷ್ಣತೆ 250-300 ಅ. ವಾಯುವ್ಯದ ಕೊನೆಗೆ ನೀರಿನ ಉಷ್ಣತೆ ವ್ಯತ್ಯಾಸಗೊಳ್ಳುತ್ತದೆ (150-300 ಅ). ಅತಿ ಕಡಿಮೆ ಸಿಹಿನೀರಿನ ಒಳಹರಿತ ಮತ್ತು ಅಧಿಕ ಉಷ್ಣತೆ ಇವುಗಳಿಂದಾಗುವ ತೀವ್ರ ಬಾಷ್ಪೀಕರಣಗಳಿಂದಾಗಿ ಖಾರಿಯ ನೀರು ಹೆಚ್ಚು ಉಪ್ಪಾಗಿರುತ್ತದೆ. ಖಾರಿಯ ಪ್ರದೇಶ ಭಾಗದಲ್ಲಿ ಲವಣಾಂಶ 37%-38% ಇದ್ದರೆ ವಾಯುವ್ಯದ ಅಂಚಿನಲ್ಲಿ ಅದು 38%-41% ಕಂಡುಬರುತ್ತದೆ.

	ಪರ್ಷಿಯನ್ ಖಾರಿಯ ಪಶ್ಚಿಮಕ್ಕೆ ವಿಶಾಲವಾದ ಅರಬ್ಬೀ ಪರ್ಯಾಯದ್ವೀಪದ ನೈಋತ್ಯಕ್ಕೆ ಇರಾನಿನ ಜಾಗ್ರೋಸ್ ಪರ್ವತಶ್ರೇಣಿ, ವಾಯುವ್ಯಕ್ಕೆ ಮೆಸೊಪೋಟೇಮಿಯನ್ ನದಿಯ ಸಂಚಯನದಿಂದ ತುಂಬಿರುವ ತಗ್ಗು ಪ್ರದೇಶ ಇವೆ. 										 (ಟಿ.ಆರ್.ವಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ